ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಶನ್ ಸೊಸೈಟಿ (ರಿ)
ಶ್ರೀ ಮಲೈ ಮಹಾದೇಶ್ವರ ಕೃಪಾ ವಿದ್ಯಾಸಂಸ್ಥೆಯಡಿಯಲ್ಲಿ ಶ್ರೀಕ್ಷೇತ್ರದಿಂದ ತಾಲ್ಲೂಕು ಕೇಂದ್ರವಾದ ಕೊಳ್ಳೇಗಾಲದ ವರೆಗೆ ಮತ್ತು ಇತರೆ ಜಿಲ್ಲೆಗಳಲ್ಲೂ ಕೂಡ ಅನೇಕ ಶಾಲಾ ಕಾಲೇಜುಗಳು, ವೇದಾಗಮ ಸಂಸ್ಕೃತ ಪಾಠಶಾಲೆಗಳು ಹಾಗೂ ಐ.ಟಿ. ತರಬೇತಿ ಕೇಂದ್ರಗಳು ಇದ್ದು ಶ್ರೀಮಠದ ಶೈಕ್ಷಣಿಕ ಕೊಡುಗೆ ಅಪಾರವಾಗಿದೆ.
ಪ್ರಸ್ತುತ ಶ್ರೀಮಠದ ವಿದ್ಯಾಸಂಸ್ಥೆ ವತಿಯಿಂದ ಈ ಕೆಳಕಂಡ ಶಾಲಾ ಕಾಲೇಜುಗಳು ನಡೆಯುತ್ತಿವೆ.
ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಶನ್ ಸೊಸೈಟಿ (ರಿ)
ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಶಾಲಾ ಕಾಲೇಜುಗಳ ವಿವರ
| ಶ್ರೀ ಮಲೆ ಮಹದೇಶ್ವರಸ್ವಾಮಿ ಕೃಪಾ ಎಜುಕೇಶನ್ ಸೊಸೈಟಿ (ರಿ) | ||||
| ಕ್ರ.ಸಂ. | ಸಂಸ್ಥೆ | ಪ್ರಕಾರ/ವರ್ಗ | ಪ್ರಾರಂಭಿಸಿದ ವರ್ಷ | ಸ್ಥಳ |
| 1 | ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತ ಪಾಠಶಾಲೆ | ಸಂಸ್ಕೃತ | 1963-64 | ಮ.ಮ. ಬೆಟ್ಟ |
| 2 | ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಹಿ.ಪ್ರಾ.ಶಾ. | ಹಿ.ಪ್ರಾ.ಶಾ. | 1963-64 | ಮ.ಮ. ಬೆಟ್ಟ |
| 3 | ಶ್ರೀ ಮಹದೇಶ್ವರ ಪ್ರೌಢಶಾಲೆ | ಪ್ರೌಢಶಾಲೆ | 1963-64 | ಮ.ಮ. ಬೆಟ್ಟ |
| 4 | ಶ್ರೀ ಮಹದೇಶ್ವರ ವೇದಾಗಮ ಪಾಠಶಾಲೆ | ವೇದಾಗಮ | 1979-80 | ಮ.ಮ. ಬೆಟ್ಟ |
| 5 | ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಕಾನ್ವೆಂಟ್ – ಕನ್ನಡ ಮಾಧ್ಯಮ – ಒಂದರಿಂದ ನಾಲ್ಕನೇ ತರಗತಿ | ಕಾನ್ವೆಂಟ್ | 1992-93 | ಮ.ಮ. ಬೆಟ್ಟ |
| 6 | ಶ್ರೀ ಮಹದೇಶ್ವರ ಜೂನಿಯರ್ ಕಾಲೇಜು [HEGP] | ಪದವಿಪೂರ್ವ ಕಾಲೇಜು | 1991-92 | ಮ.ಮ. ಬೆಟ್ಟ |
| 7 | ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ | ಸಂಸ್ಕೃತ | ಹಳೆಯೂರು(ಮ.ಮ. ಬೆಟ್ಟ) | |
| 8 | ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ | ಸಂಸ್ಕೃತ | 1980-81 | ಕೊಳ್ಳೇಗಾಲ |
| 9 | ಶ್ರೀ ಮಹದೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ [ಐ.ಟಿ.ಐ.] – ಫಿಟ್ಟರ್, ಎಲೆಕ್ಟ್ರಾನಿಕ್ಸ್ | ಐ.ಟಿ.ಐ. | 1998 | ಕೊಳ್ಳೇಗಾಲ |
| 10 | ಶ್ರೀ ಮಹದೇಶ್ವರ ಜೂನಿಯರ್ ಕಾಲೇಜು [HEGP] | ಪದವಿಪೂರ್ವ ಕಾಲೇಜು | 1987 | ಕೊಳ್ಳೇಗಾಲ |
| 11 | ಶ್ರೀ ಮಹದೇಶ್ವರ ಸಂಸ್ಕೃತ ಕಾಲೇಜು | ಸಂಸ್ಕೃತ | 1997 | ಕೊಳ್ಳೇಗಾಲ |
| 12 | ವಿದ್ಯೋದಯ ಕಾನ್ವೆಂಟ್ | ಕಾನ್ವೆಂಟ್ | ಕೊಳ್ಳೇಗಾಲ | |
| 13 | ಶ್ರೀ ಮಹದೇಶ್ವರ ಸ್ವಾಮಿ ಕಾನ್ವೆಂಟ್ | ಕಾನ್ವೆಂಟ್ | 1996 | ಕಣ್ಣೂರು |
| 14 | ಜ್ಞಾನಜ್ಯೋತಿ ಕಾನ್ವೆಂಟ್ | ಕಾನ್ವೆಂಟ್ | 1997 | ಒಡೆಯರಪಾಳ್ಯ |
| 15 | ಶ್ರೀ ಮಹದೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ [ಐ.ಟಿ.ಐ.] – ಫಿಟ್ಟರ್ | ಐ.ಟಿ.ಐ. | 2008 | ಹನೂರು |
| 16 | ಶ್ರೀ ಮಹದೇಶ್ವರ ಪ್ರೌಢಶಾಲೆ | ಪ್ರೌಢಶಾಲೆ | 1980 | ಒಡೆಯರಪಾಳ್ಯ |
| 17 | ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ | ಸಂಸ್ಕೃತ | 1980-81 | ಒಡೆಯರಪಾಳ್ಯ |
| 18 | ಶ್ರೀ ಮಹದೇಶ್ವರ ಜೂನಿಯರ್ ಕಾಲೇಜು [HEGP] | ಪದವಿಪೂರ್ವ ಕಾಲೇಜು | ಒಡೆಯರಪಾಳ್ಯ | |
| 19 | ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ | ಸಂಸ್ಕೃತ | 1980-81 | ಪಿ.ಜಿ.ಪಾಳ್ಯ |
| 20 | ಶ್ರೀ ಮಹದೇಶ್ವರ ಪ್ರೌಢಶಾಲೆ [ಅನುದಾನರಹಿತ] | ಪ್ರೌಢಶಾಲೆ | 1997 | ಕೆಂಪನಪಾಳ್ಯ |
| 21 | ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ | ಸಂಸ್ಕೃತ | 1980 | ಹೊಸಪಾಳ್ಯ |
| 22 | ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ | ಸಂಸ್ಕೃತ | 1995 | ಪೊನ್ನಾಚಿ |
| 23 | ಶ್ರೀ ಮಹದೇಶ್ವರ ಅನಾಥಾಲಯ | ಗಂಡುಮಕ್ಕಳ ಹಾಸ್ಟೆಲ್ | 1979 | ಮ.ಮ. ಬೆಟ್ಟ |
| 24 | ಅನಾಥಾಲಯ – ಗಂಡು/ಹೆಣ್ಣು [ಪ್ರತ್ಯೇಕ] | ಹಾಸ್ಟೆಲ್ | 1979 | ಮ.ಮ. ಬೆಟ್ಟ |
| 25 | ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ | ಗಂಡುಮಕ್ಕಳ ಹಾಸ್ಟೆಲ್ | 2000 | ಪೊನ್ನಾಚಿ |
ಕೃಷಿ ಕ್ಷೇತ್ರದಲ್ಲಿ ಶ್ರೀಸಾಲೂರು ಮಠ
ಶ್ರೀಮಠವು ತನ್ನ ಸುತ್ತಮುತ್ತಲಿನ ಬೇಡ, ಕಾಡ ಜನರನ್ನು ಒಕ್ಕಲುತನ ಮಾಡಲು ಪ್ರೋತ್ಸಾಹಿಸಿದ ಮಠ. ಹೀಗಿರುವಾಗ ಶ್ರೀಮಠವು ಕೂಡ ಪ್ರಾರಂಭದಿಂದಲೂ ಕೃಷಿ ಕಾಯಕವನನ್ನು ಪಾಲಿಸಿಕೊಂಡು ಬರುತ್ತಲಿದೆ. “ಅನ್ನಂ ಪರಬ್ರಹ್ಮ” ಎಂಬ ಲೋಕೋಕ್ತಿಯಂತೆ ಶ್ರೀಮಠಕ್ಕೆ ಬರುವ ಭಕ್ತಾದಿಗಳು ಪ್ರಸಾದ ಸ್ವೀಕರಿಸಿಯೇ ಹೋಗಬೇಕೆಂದು ದಾಸೋಹದ ವ್ಯವಸ್ಥೆಯನ್ನು ಆದಿಕಾಲದಿಂದಲೂ ಮಾಡಿಕೊಂಡು ಬರುತ್ತಲಿದೆ. ಹೊರಗಿನ ಹಳ್ಳಿಗಳಿಗೆ ಹೋಗಿ ವರ್ಷಕ್ಕೊಮ್ಮೆ ಕ್ವಾರಣ್ಯ ಭಿಕ್ಷೆ ಮಾಡಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಬರುತ್ತಿದ್ದರು. ಮುಂದೆ ಭಕ್ತಾದಿಗಳು ಮತ್ತು ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದುದರಿಂದ ಕೃಷಿ ಭೂಮಿಯನ್ನು ವಿಸ್ತರಿಸಿ ಹೆಚ್ಚು ವ್ಯವಸಾಯ ಮಾಡಲು ಮಠ ಮುಂದಾಯಿತು. ಬಹುತೇಕ ಶ್ರೀಮಠದ ಜಮೀನಿನಲ್ಲಿ ಬೆಳೆದ ಧಾನ್ಯದಲ್ಲೇ ಮಠದ ದಾಸೋಹ ಮುಂದುವರಿಯುವAತಾಯಿತು. ಶ್ರೀಮಠದಲ್ಲಿ ವ್ಯಾಸಂಗದ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿ ಕಾಯಕ ತತ್ವವು ಕಲಿಯುವಂತೆ ರಜಾ ದಿನಗಳಲ್ಲಿ ಮಠದ ಜಮೀನಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸುತ್ತಾ ಕೃಷಿಯ ಪರಿಚಯವನ್ನು ಮಾಡಿಕೊಡುತ್ತಿದ್ದರು.
ಶ್ರೀಮಠದ ಜಮೀನಿನಲ್ಲಿ ರಾಗಿ, ಜೋಳ, ಅವರೆ, ಸಾಸಿವೆ, ಹುಚ್ಚೆಳ್ಳು, ಸಾಮೆ, ನವಣೆ, ಹಾರಕ, ಮುಂತಾದ ಧಾನ್ಯಗಳನ್ನು ಬೆಳೆಯುವುದರ ಜೊತೆಗೆ ವಾಣಿಜ್ಯ ಬೆಳೆಗಳಾದ ಅರಿಸಿನ ಸೂರ್ಯಕಾಂತಿಗಳನ್ನು ಸಹ ಬೆಳೆಯಲಾಗುತ್ತದೆ. ಕ್ರಮೇಣ ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ ಮುಂತಾದ ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗಿ ಕೇವಲ ರಾಗಿ ಮತ್ತು ಇತರೆ ಧಾನ್ಯಗಳನ್ನು ಬೆಳೆಯುವಂತಾಯಿತು. ಆದರೂ ಪ್ರಸ್ತುತ ಇರುವ ಶ್ರೀಶಾಂತಮಲ್ಲಿಕಾರ್ಜುನಸ್ವಾಮಿಗಳ ಒಲವಿನಿಂದ ಹಿಂದಿನ ಆಹಾರಪದ್ಧತಿ, ಇಂದಿನ ಜನಾಂಗಕ್ಕೆ ಅಗತ್ಯವೆಂಬುದನ್ನು ಮನಗಂಡು ಮತ್ತೆ ಮಠದ ಜಮೀನಿನಲ್ಲಿ ಸಿರಿಧಾನ್ಯವನ್ನು ಬೆಳೆಯುವ ಪರ್ವಕ್ಕೆ ನಾಂದಿ ಹಾಡಿರುವುದು ವಿಶೇಷವಾಗಿದೆ.