ಶ್ರೀ ಸಾಲೂರು ಬೃಹನ್ಮಠ

ಸುತ್ತೂರು ಜಗದ್ಗುರುಗಳ ಜೊತೆ ಸಾಲೂರು ಶ್ರೀಗಳು

ಪೂಜ್ಯ ಸುತ್ತೂರು ಜಗದ್ಗುರುಗಳ ಜೋತೆ ಸಾಲೂರು ಶ್ರೀಗಳು

ಶ್ರೀ ಸಾಲೂರು ಬೃಹನ್ಮಠ

ಶ್ರೀ ಸಾಲೂರು ಬೃಹನ್ಮಠ

ಶ್ರೀ ಸಾಲೂರು ಬೃಹನ್ಮಠ

ಶ್ರೀ ಸಾಲೂರು ಬೃಹನ್ಮಠ

ಶ್ರೀ ಮಠದ ಬಗ್ಗೆ

ಶ್ರೀಮಠವು ತನ್ನ ಸುತ್ತಮುತ್ತಲಿನ ಬೇಡ, ಕಾಡ ಜನರನ್ನು ಒಕ್ಕಲುತನ ಮಾಡಲು ಪ್ರೋತ್ಸಾಹಿಸಿದ ಮಠ. ಹೀಗಿರುವಾಗ ಶ್ರೀಮಠವು ಕೂಡ ಪ್ರಾರಂಭದಿಂದಲೂ ಕೃಷಿ ಕಾಯಕವನನ್ನು ಪಾಲಿಸಿಕೊಂಡು ಬರುತ್ತಲಿದೆ. “ಅನ್ನಂ ಪರಬ್ರಹ್ಮ” ಎಂಬ ಲೋಕೋಕ್ತಿಯಂತೆ ಶ್ರೀಮಠಕ್ಕೆ ಬರುವ ಭಕ್ತಾದಿಗಳು ಪ್ರಸಾದ ಸ್ವೀಕರಿಸಿಯೇ ಹೋಗಬೇಕೆಂದು ದಾಸೋಹದ ವ್ಯವಸ್ಥೆಯನ್ನು ಆದಿಕಾಲದಿಂದಲೂ ಮಾಡಿಕೊಂಡು ಬರುತ್ತಲಿದೆ.

ಹೆಚ್ಚಿನ ಓದಿಗೆ ಕ್ಲಿಕ್ಕಿಸಿ

Watch Our Videos

ಶ್ರೀ ಪಟ್ಟದ ಗುರುಸ್ವಾಮಿಗಳು

ಕೊಳ್ಳೇಗಾಲ ತಾಲ್ಲೂಕಿನ ಚಾಮರರಾಜನಗರ  ಜಿಲ್ಲೆಯ ಜಿ.ಕೆ.ಹೊಸೂರಿನ ಶರಣ ದಂಪತಿಗಳಾದ ಶ್ರೀಮತಿ ಪುಟ್ಟಮಾದಮ್ಮ ಮತ್ತು ಶ್ರೀ ರುದ್ರಪ್ಪ ಅವರ ಸುಪುತ್ರರು ೧೯೫೬ ಆಗಸ್ಟ್-೨ ರಂದು ಜನಿಸಿದ ಇವರರು ಬಾಲ್ಯದಲ್ಲಿಯೇ ಸಾಲೂರು ಮಠಕ್ಕೆ ವಿದ್ಯಾರ್ಜನೆಗಾಗಿ ಸೇರಿಕೊಂಡು ಮಹದೇವಸ್ವಾಮಿಗಳ ಶಿಷ್ಯರಾಗಿ ಶ್ರೀ ಮಠದ ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮಹದೇವಸ್ವಾಮಿಗಳು ಲಿಂಗೈಕ್ಯರಾದ ನಂತರ ಶ್ರೀಮಠಕ್ಕೆ ೨೯-೦೧-೧೯೯೫ ರಲ್ಲಿ ೧೭ನೆಯ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು.

ಭಕ್ತಾದಿಗಳು ಕಂಡ ಹಾಗೆ ೧೯೯೫ ರಿಂದ ಈಚೆಗೆ ಮಹದೇಶ್ವರ ಬೆಟ್ಟ ಅಭಿವೃದ್ಧಿಗೊಂಡಿದೆ ಎಂದರೆ ಅದಕ್ಕೆ ಕಾರಣಕರ್ತರು ಗುರುಸ್ವಾಮಿಗಳು.ಇವರ ಕಾಲದಲ್ಲೇ ಮಹದೇಶ್ವರಸ್ವಾಮಿ ದೇವಸ್ಥಾನದ ಏಳಂತಸ್ತಿನ ರಾಜಗೋಪುರ ನಿರ್ಮಾಣವಾಯಿತು. ಚಿಕ್ಕ ಕಲ್ಯಾಣಿ ಅಭಿವೃದ್ಧಿ ಜೀರ್ಣೋದ್ಧಾರಗೊಂಡಿತು. ಭಕ್ತಾದಿಗಳಿಗೆ ತಂಗಲು ರಂಗ ಮಂದಿರದ ಮುಂದೆ ಬೃಹತ್ ಗಾತ್ರದ ಶೆಡ್ಡು ನಿರ್ಮಾಣಗೊಂಡಿತು. ಶ್ರೀಮಠದ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾ ತಾವೂ ಕೂಡ ಶಿಷ್ಯರ ಜೊತೆ ಕಳೆ ಕೀಳುತ್ತಾ, ಹೂವಿನ ತೋಟ, ಬಿಲ್ವವನವನ್ನು ಬೆಳೆಸಿ ವ್ಯವಸಾಯದಲ್ಲಿ ಪರಿಣಿತರೂ ಆದರು. ಇವರ ಮುಗ್ದತೆಗೆ ಮಾರುಹೋದ ಭಕ್ತವೃಂದ ಇವರನ್ನು ಅಪಾರ ಪ್ರೀತಿ ಗೌರವಗಳಿಂದ ಕಾಣುತ್ತಾರೆ.

ಎಲ್ಲಾ ಭಕ್ತಾದಿ ಹಾಗೂ ಯಾತ್ರಿಕರಿಗೆ ಮಠವೂ ಕೂಡ ಊಟ, ವಸತಿಗೆ ಅನುವು ಮಾಡಿಕೊಡಲು ಶ್ರೀಗಳು ಶ್ರಮಿಸಿದರು. ಬಡವ ಶ್ರೀಮಂತರೆನ್ನದೆ ಶ್ರೀಮಠಕ್ಕೆ ಬರುವ ಭಕ್ತಾಧಿಗಳನ್ನು ಗಮನಿಸಿಕೊಳ್ಳುತ್ತಾರೆ. ಹಳ್ಳಿ ಹಳ್ಳಿಗೆ ಭಿಕ್ಷೆಗೆ ತೆರಳಿ ದವಸ ಧಾನ್ಯಗಳ ಸಂಗ್ರಹಣೆ ಮಾಡಿದುದಲ್ಲದೆ ಇವರ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಠದಿಂದ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ. ಪ್ರಸ್ತುತ ಶ್ರೀಗಳು ದೇವಸ್ಥಾನ ಮತ್ತು ಮಠದ ವಿಚಾರಗಳಲ್ಲಿ ಸಲಹೆ ಸೂಚನೆ ಕೊಡುತ್ತಾ, ಭಕ್ತರನ್ನು ಆಶೀರ್ವದಿಸುತ್ತಾ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ.

ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ಶರಣ ದಂಪತಿಗಳಾದ ಮಹದೇವಸ್ವಾಮಿ ಮತ್ತು ಸುಂದ್ರಮ್ಮ ಅವರ ಜೇಷ್ಠ ಪುತ್ರನಾಗಿ ೧೯೮೯ ಜೂನ್ ೦೪ ರಂದು ಜನಿಸಿದರು. ನಾಗೇಂದ್ರ ಎಂಬುದು ಇವರ ಪೂರ್ವಾಶ್ರಮದ ಹೆಸರು.

ಓದಿನಲ್ಲಿ ಸದಾ ಮುಂದಿದ್ದ ಶ್ರೀಗಳು ಸಂಸ್ಕೃತ ವೇದ ಶಿಕ್ಷಣವನ್ನು ಸಿದ್ದಗಂಗಾ ಮಠದಲ್ಲಿ, ಆಗಮ ಮತ್ತು ಮಾದ್ಯಮಿಕ ಸಂಸ್ಕೃತ ಶಿಕ್ಷಣವನ್ನು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ, ಸ್ನಾತಕೋತ್ತರ ಪದವಿಯನ್ನು ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿ ಹಲವು ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನ ಪಡೆದಿರುತ್ತಾರೆ. ನಾಡಿನ ಖ್ಯಾತ ವಿದ್ವಾಂಸ ಮಠಾಧಿಪತಿಗಳಾದ ಶ್ರೀಇಮ್ಮಡಿ ಶಿವಬಸವಸ್ವಾಮಿಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಲ್ಲದೆ; ನೇಪಾಳ, ಮಲೇಷಿಯಾದ ಪ್ರಸಿದ್ಧ ವಿಶ್ವವಿದ್ಯಾನಿಯಲಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಪ್ರಸ್ತುತ ಶ್ರೀಗಳು ಸಂಶೋದನಾ ಕ್ಷೆತ್ರದಲ್ಲಿ ತೊಡಗಿಸಿಕೊಂಡಿರುವುದಲ್ಲದೆ ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂದ್ರಪ್ರದೇಶ, ತಮಿಳುನಾಡು, ಝಾರ್ಕಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾಷೆ, ಧರ್ಮ, ಸಾಹಿತ್ಯ-ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿರುತ್ತಾರೆ.

ಅಪಾರ ವಿದ್ವತ್ತಿನಿಂದ ಕೂಡಿದ ಇವರು ಹದಿನೆಂಟನೆಯ ಪೀಠಾಧಿಪತಿಗಳಾಗಿ ದಿನಾಂಕ : ೦೮-೦೮-೨೦೨೦ ರಂದು ಶ್ರೀ ಸಾಲೂರು ಮಠ ಹಾಗೂ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡಿರುತ್ತಾರೆ.

ವಿಶಾಲವಾದ ದೂರದೃಷ್ಟಿ, ಅಪಾರ ವಿದ್ವತ್ತು, ಪ್ರಗತಿಪರ ಚಿಂತನೆಗಳಿಂದ ಕೂಡಿದ ಶ್ರೀಗಳವರಿಂದ ಶ್ರೀಮಠ ಮತ್ತು ದೇವಸ್ಥಾನಗಳೆರಡೂ ಅಭಿವೃದ್ಧಿ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಶ್ರೀಮಠದ ಅಪಾರ ಭಕವೃಂದ ಶ್ರೀಗಳ ವ್ಯಕ್ತಿತ್ವಕ್ಕೆ ಮಾರುಹೋಗಿ ಇನ್ನಿಲ್ಲದ ನಿರೀಕ್ಷೆಗಳಿಂದ ಭರವಸೆಯ ದೃಷ್ಟಿಯಲ್ಲಿ ಶ್ರೀಗಳನ್ನು ಬರಮಾಡಿಕೊಂಡಿದೆ. ಶ್ರೀಗಳ ನಡೆಯನ್ನು ಗಮನಿಸಿದಾಗ ಈ ಭಕ್ತರ ನಿರೀಕ್ಷೆ ಸುಳ್ಳಾಗುವುದಿಲ್ಲ ಎಂಬ ಭರವಸೆ ಮೂಡುತ್ತದೆ.

ವಿಳಾಸ

ಶ್ರೀ ಸಾಲೂರು ಬೃಹನ್ಮಠ,
ಮಲೆ ಮಹದೇಶ್ವರ ಬೆಟ್ಟ, ಹನೂರು ತಾಲೂಕು,
ಚಾಮರಾಜನಗರ ಜಿಲ್ಲೆ – 571490

ಸಂಪರ್ಕ ಸಂಖ್ಯೆ: 082-25295551
ಇ-ಮೇಲ್: srisalurumathmmhills@gmail.com

© Sri Saluru Math 2022. | All rights reserved.