
ಭಾರತದ ಧಾರ್ಮಿಕ ಇತಿಹಾಸವನ್ನು ಅವಲೋಕಿಸಿದಾಗ ಮಠಗಳು ಪ್ರಾಚಿನ ಕಾಲದಿಂದಲೂ ತನ್ನದೆ ಆದ ವೈಶಿಷ್ಟ್ಯವು ಹೊಂದಿದೆ ಕರ್ನಾಟಕದಲ್ಲಿ 12ನೆಯ ಶತಮಾನವು ಶರಣರ ಕಾಯಕ ದಾಸೋಹ ಕಲ್ಪನೆಯಿಂದ ಮಠಗಳು ಪ್ರಜ್ವಲಿಸಲು ಪ್ರಾರಂಭಿಸಿದವು 19-20ನೆಯ ಶತಮಾನದಲ್ಲಿ ಕಾಯಕದ ಜೋತೆಗೆ ಶೈಕ್ಷಣಿಕ ಕ್ರಾಂತಿಗೂ ಅಡಿಗಲ್ಲನ್ನಾಕಿದವು ಕಾಯಕ-ದಾಸೋಹ-ಶೈಕ್ಷಣಿಕವಾಗಿ ಅನೇಕ ಮಠಗಳ ನಮ್ಮ ನಾಡಿನಲ್ಲಿ ಇಂದಿಗೂ ಸೇವೆಯನ್ನು ಗೈಯುತ್ತಿರುವುದನ್ನು ಕಾಣಬಹುದು. ಅಂತಹ ಸಾಲಿನಲ್ಲಿ ಶ್ರೀ ಸಾಲೂರು ಬೃಹನ್ಮಠವೂ ಕೂಡ ಒಂದಾಗಿದೆ.
ಸಮಾಜದ ಉನ್ನತಿಗೆ ಧಾರ್ಮಿಕ ಚಿಂತನೆಗೆ ಶ್ರೀ ಮಠವು ಹಳೆಯೂರು, ಎಲಚಿಕೆರೆ, ಗುಂಡೇಗಾಲ, ಮೈಸೂರು, ಮಲ್ಲಾಪುರ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯ ದ್ರೋಣಗಿರಿಮಠ, ಬರಗೂರುಶ್ರೀಮಠ ಹೀಗೆ ಆಯಾ ಭಾಗಾದಲ್ಲಿ ಶಾಖಾ ಮಠಗಳನ್ನು ಶತಮಾನಗಳಿಂದೆಯೆ ಸ್ಥಾಪಿಸಿ ಅದರಲ್ಲಿ ಆ ಮಠಗಳು ಮತ್ತು ಮಠಾಧಿಪತಿಗಳ ಮುಖಾಂತರ ಧರ್ಮಕ್ಕೆ ಮತ್ತು ಸಮಾಜಕ್ಕೆ ಕಾಯಕ ದಾಸೋಹದ ಅರಿವನ್ನು ಮೂಡಿಸುತ್ತಿದ್ದರು.